ಅಂಗನವಾಡಿ ನೇಮಕಾತಿ: WCD Anganwadi Recruitment 2022

Spread the love

WCD Anganwadi Recruitment 2022

WCD Anganwadi Recruitment 2022: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿಜಯನಗರ ಮತ್ತು ಚಿಕ್ಕಮಗಳೂರು ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯವಿರುವ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

WCD Anganwadi Recruitment 2022

ಉದ್ಯೋಗ ವಿವರ

ಇಲಾಖೆ ಹೆಸರು: WCD (ವಿಜಯನಗರ ಮತ್ತು ಚಿಕ್ಕಮಗಳೂರು )
ಹುದ್ದೆಯ ಹೆಸರು: ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು.
ಹುದ್ದೆಗಳ ಸಂಖ್ಯೆ: 137

ಅರ್ಜಿ ಸಲ್ಲಿಸುವ ಬಗೆ : online

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 07.09.2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06.10.2022

ಶೈಕ್ಷಣಿಕ ಅರ್ಹತೆ:

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ – SSLC

ಅಂಗನವಾಡಿ ಸಹಾಯಕಿ ಹುದ್ದೆಗೆ– ಕನಿಷ್ಠ 4ನೇ ತರಗತಿ ತೇರ್ಗಡೆ, ಗರಿಷ್ಠ 9ನೇ ತರಗತಿ.

ಅರ್ಜಿ ಶುಲ್ಕ ವಿವರ: ಇಲ್ಲ

ವಯೋಮಿತಿ ಅರ್ಹತೆಗಳು:18-35 ವರ್ಷ

ಸಡಿಲಿಕೆ : ಕಾರ್ಯಕರ್ತೆ ಹುದ್ದೆಗೆ ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ವಿಧಾನ: ಅಭ್ಯರ್ಥಿಗಳು ವಿದ್ಯಾರ್ಹತೆಯಲ್ಲಿ ಪಡೆದ ಅಂಕ ಮತ್ತು ಬೋನಸ್ ಅಂಕಗಳನ್ನು ಒಳಗೊಂಡಂತೆ ಪಡೆದ ಒಟ್ಟು ಅಂಕಗಳಿಗನುಸಾರವಾಗಿ ಕ್ರೂಡೀಕೃತ ಪಟ್ಟಿಯನ್ನು ಸಿದ್ಧಪಡಿಸಿ ಅರ್ಹತೆ ಮತ್ತು ಮೆರಿಟ್ ಗೆ ಅನುಸಾರವಾಗಿ ಪರಿಶೀಲಿಸಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಆನ್‌ಲೈನ್‌ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು

1.ಜನನ ಪ್ರಮಾಣ ಪತ್ರ/ ಜನ್ಮ ದಿನಾಂಕ ಇರುವ ಎಸ್.ಎಸ್.ಎಲ್.ಸಿ ಅಂಕಪಟ್ಟಿ.

2.ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ.

3.ತಹಶೀಲ್ದಾರರು/ ಉಪತಹಸೀಲ್ದಾರರಿಂದ ಪಡೆದ ಮೂರು ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ

4.ಮೀಸಲಾತಿ ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳು ಇದ್ದರೆ ಲಗತ್ತಿಸಬಹುದು.

ಹಚ್ಚಿನ ಮಾಹಿತಿಗಾಗಿ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

ಇತರೆ ಮಾಹಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸ್ಥಳೀಯ ಮಹಿಳೆಯಾಗಿದ್ದು, ಕಾರ್ಯಕರ್ತೆ ಅಥವಾ ಸಹಾಯಕಿ ಹುದ್ದೆ ಖಾಲಿ ಇರುವ ಅದೇ ಗ್ರಾಮ/ ಪುರಸಭೆ ವ್ಯಾಪ್ತಿಯಾಗಿದ್ದಲ್ಲಿ ವಾರ್ಡ್ ವ್ಯಾಪ್ತಿಯ ನಿವಾಸಿಗಳಾಗಿರಬೇಕು.

WCD Anganwadi Recruitment Important Links

ಉದ್ಯೋಗದ ಅಧಿಸೂಚನೆ (ವಿಜಯನಗರ): https://anganwadirecruit.kar.nic.in/docs/31525328992.pdf

ಉದ್ಯೋಗದ ಅಧಿಸೂಚನೆ (ಚಿಕ್ಕಮಗಳೂರು): https://anganwadirecruit.kar.nic.in/docs/978007839.pdf

ಅರ್ಜಿ ಲಿಂಕ್ : https://anganwadirecruit.kar.nic.in/?oipopup=1

Join Our Telegram Channel


Spread the love

Leave a Comment