ಅಂಚೆ ಇಲಾಖೆಯಲ್ಲಿ 44228 ಹುದ್ದೆಗಳ ಬೃಹತ್ ನೇಮಕಾತಿ: Post Office Recruitment 2024

Spread the love

Post Office Recruitment 2024

Post office Recruitment 2024 : ಭಾರತೀಯ ಅಂಚೆ ಇಲಾಖೆಯಿಂದ ಅಂಚೆ ವೃತ್ತದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ವಯೋಮಾನ, ವೇತನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Post Office Recruitment 2024 : ಉದ್ಯೋಗ ವಿವರ

ಇಲಾಖೆ ಹೆಸರು: ಭಾರತೀಯ ಅಂಚೆ ಇಲಾಖೆ

ಹುದ್ದೆಯ ಹೆಸರು: ಗ್ರಾಮೀಣ ಡಾಕ್ ಸೇವಕ (ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್)

ಹುದ್ದೆಗಳ ಸಂಖ್ಯೆ: 44228 ಅದರಲ್ಲಿ ಕರ್ನಾಟಕ ಅಂಚೆ ವೃತ್ತದಲ್ಲಿ 1940 ಹುದ್ದೆಗಳು ಖಾಲಿ ಇದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು 10ನೇ ತರಗತಿ ಅಥವಾ S.S.L.C ಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕಂಪ್ಯೂಟರ್ ಜ್ಞಾನದ ಜೊತೆಗೆ ಸೈಕ್ಲಿಂಗ್ ಜ್ಞಾನ ಹೊಂದಿರಬೇಕು.

ವಯೋಮಾನ :  ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ :
OBC ಅಭ್ಯರ್ಥಿಗಳಿಗೆ – 03 ವರ್ಷ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷ
PWD ಅಭ್ಯರ್ಥಿಗಳಿಗೆ – 10 ವರ್ಷ

ಆಯ್ಕೆ ವಿಧಾನ : S.S.L.C ವಿದ್ಯಾರ್ಹತೆಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ದಾಖಲೆಗಳ ಪರಿಶೀಲನೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :
• ಪ‌.ಜಾತಿ, ಪ.ಪಂ., ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
• ಉಳಿದ ಅಭ್ಯರ್ಥಿಗಳು ರೂ. 100

ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಶುಲ್ಕ ಪಾವತಿಸಬಹುದು.

Post Office Recruitment 2024_ Important Dates

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 15.07.2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  05.08.2024

Post Office Recruitment 2024_ Important Links

ಅಫಿಸಿಯಲ್ ವೆಬ್ ಸೈಟ್: https://indiapostgdsonline.gov.in/

ಅಧಿಸೂಚನೆ : https://indiapostgdsonline.cept.gov.in/Notifications/Model_Notification.pdf

Vacancy list: https://indiapostgdsonline.cept.gov.in/Notifications/Final_Post_Consolidation.pdf

ಅರ್ಜಿ ಲಿಂಕ್ : https://indiapostgdsonline.gov.in/

Join WhatsApp: https://chat.whatsapp.com/KMQb2qVFveI02DLiIAi8YJ

Join Teligram: https://t.me/jobsearchv183


Spread the love

Leave a Comment