ಭಾರತೀಯ ಜೀವ ವಿಮಾ ನಿಗಮ ನೇಮಕಾತಿ – LIC AE Recruitment 2025

Spread the love

LIC AE Recruitment 2025 :

LIC AE Recruitment 2025 : ಭಾರತೀಯ ಜೀವ ವಿಮಾ ನಿಗಮದಲ್ಲಿ ಅಗತ್ಯ ಅಸಿಸ್ಟಂಟ್ ಇಂಜಿನಿಯರ್ ಮತ್ತು ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

LIC AE Recruitment 2025 : ಉದ್ಯೋಗ ವಿವರ :

ಇಲಾಖೆ ಹೆಸರು: LIC

ಹುದ್ದೆಯ ಹೆಸರು: ಅಸಿಸ್ಟಂಟ್ ಇಂಜಿನಿಯರ್ & ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಸ್ಪೆಷಲಿಸ್ಟ್)

ಹುದ್ದೆಗಳ ಸಂಖ್ಯೆ: 491

ಶೈಕ್ಷಣಿಕ ಅರ್ಹತೆ : *ಅಸಿಸ್ಟಂಟ್ ಇಂಜಿನಿಯರ್ (ಸಿವಿಲ್) – ಬಿ.ಟೆಕ್/ ಬಿ.ಇ (ಸಿವಿಲ್)
* ಅಸಿಸ್ಟಂಟ್ ಇಂಜಿನಿಯರ್ (ಇಲೆಕ್ಟ್ರಿಕಲ್) – ಬಿ.ಟೆಕ್/ ಬಿ.ಇ (ಇಲೆಕ್ಟ್ರಿಕಲ್)
* ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಸ್ಪೆಷಲಿಸ್ಟ್) – ಪದವಿ, ಸಿಎ, ಸಿಎಸ್, ಎಲ್.ಎಲ್.ಬಿ.
ವಯೋಮಾನ :  ದಿನಾಂಕ 01 ಆಗಸ್ಟ್ 2025ಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿ ಹೊಂದಿರಬೇಕು.

ಹುದ್ದೆ  / ವಯೋಮಿತಿ
ಅಸಿಸ್ಟಂಟ್ ಇಂಜಿನಿಯರ್ (ಸಿವಿಲ್) – ಕನಿಷ್ಠ 21 ವರ್ಷ – ಗರಿಷ್ಠ 30 ವರ್ಷ
ಅಸಿಸ್ಟಂಟ್ ಇಂಜಿನಿಯರ್ (ಇಲೆಕ್ಟ್ರಿಕಲ್) – ಕನಿಷ್ಠ 21 ವರ್ಷ – ಗರಿಷ್ಠ 30 ವರ್ಷ
ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಸಿಎ, ಲೀಗಲ್) -ಕನಿಷ್ಠ 21 ವರ್ಷ – ಗರಿಷ್ಠ 32 ವರ್ಷ
ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಸಿಎಸ್, ಅಕ್ಚುಅರಿಯಲ್, ಇನ್ಶುರೆನ್ಸ್ ಸ್ಪೆಷಲಿಸ್ಟ್) – ಕನಿಷ್ಠ 21 ವರ್ಷ – ಗರಿಷ್ಠ 30 ವರ್ಷ್

ವಯೋಮಿತಿ ಸಡಿಲಿಕೆ :
SC, ST ಅಭ್ಯರ್ಥಿಗಳಿಗೆ – 05 ವರ್ಷ
OBC ಅಭ್ಯರ್ಥಿಗಳಿಗೆ – 03 ವರ್ಷ
PWBD (ಜನರಲ್) ಅಭ್ಯರ್ಥಿಗಳಿಗೆ – 10 ವರ್ಷ
PWBD (SC/ ST) ಅಭ್ಯರ್ಥಿಗಳಿಗೆ – 15 ವರ್ಷ
PWBD (OBC) ಅಭ್ಯರ್ಥಿಗಳಿಗೆ – 13 ವರ್ಷ


ಆಯ್ಕೆ ವಿಧಾನ : ಅಭ್ಯರ್ಥಿಗಳಿಗೆ ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ಶುಲ್ಕ ಪಾವತಿಸುವ ವಿಧಾನ :
ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ನಿಗದಿತ ಅರ್ಜಿ ಶುಲ್ಕದ ವಿವರ :
SC, ST, PWBD ಅಭ್ಯರ್ಥಿಗಳು – ರೂ. 85
ಉಳಿದ ಅಭ್ಯರ್ಥಿಗಳು – ರೂ. 700

LIC AE Recruitment 2025 _ Important Dates

ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ :16.08.2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ :08.09.2025
ಪ್ರಿಲಿಮಿನರಿ ಪರೀಕ್ಷೆ ದಿನಾಂಕ :03.10.2025
ಮುಖ್ಯ ಪರೀಕ್ಷೆ ದಿನಾಂಕ :08.11.2025

LIC AE Recruitment 2025 _ Important link

ಅಫಿಸಿಯಲ್ ವೆಬ್ ಸೈಟ್: https://licindia.in/

ಅಧಿಸೂಚನೆ :https://licindia.in/documents/d/guest/aao-specialist-notification-2025-final

ಅರ್ಜಿ ಲಿಂಕ್ :https://ibpsonline.ibps.in/licjul25/


Spread the love

Leave a Comment