KMF SHIMUL Recruitment 2023

Spread the love

Join Telegram Channel for Daily Updates

KMF SHIMUL Recruitment 2023

KMF SHIMUL Recruitment 2023 : ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಇದರಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್‌ಸೈಟ್‌ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

KMF SHIMUL Recruitment 2023_ಉದ್ಯೋಗ ವಿವರ

ಇಲಾಖೆ ಹೆಸರು: KMF

ಅರ್ಜಿ ಸಲ್ಲಿಸುವ ಬಗೆ : online

ಹುದ್ದೆಯ ಹೆಸರು: ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ), ಸಹಾಯಕ ವ್ಯವಸ್ಥಾಪಕರು (ಆಡಳಿತ), ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್), ಎಂಐಎಸ್/ ಸಿಸ್ಟಂ ಆಫೀಸರ್, ಮಾರುಕಟ್ಟೆ ಅಧಿಕಾರಿ, ತಾಂತ್ರಿಕ ಅಧಿಕಾರಿ (ಅಭಿಯಂತರ) – ಮೆಕಾನಿಕಲ್, ತಾಂತ್ರಿಕ ಅಧಿಕಾರಿ (ಅಭಿಯಂತರ) – ಎಲೆಕ್ಟ್ರಿಕಲ್, ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) – ಕೆಮಿಸ್ಟ್ರಿ, ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) – ಮೈಕ್ರೊಬಯಾಲಜಿ, ತಾಂತ್ರಿಕ ಅಧಿಕಾರಿ (ಡಿಟಿ), ಕೆಮಿಸ್ಟ್ ದರ್ಜೆ-1 (ಕೆಮಿಸ್ಟ್ರಿ), ಕೆಮಿಸ್ಟ್ ದರ್ಜೆ-1 (ಮೈಕ್ರೊಬಯಾಲಜಿ), ವಿಸ್ತರಣಾಧಿಕಾರಿ ದರ್ಜೆ-3, ಆಡಳಿತ ಸಹಾಯಕ ದರ್ಜೆ-2, ಲೆಕ್ಕ ಸಹಾಯಕ ದರ್ಜೆ-2, ಮಾರುಕಟ್ಟೆ ಸಹಾಯಕ ದರ್ಜೆ-2, ಕಿರಿಯ ಸಿಸ್ಟಂ ಆಪರೇಟರ್, ಶೀಘ್ರಲಿಪಿಗಾರರು ದರ್ಜೆ-2, ಕಿರಿಯ ತಾಂತ್ರಿಕರು–ಎಲೆಕ್ಟ್ರಿಕಲ್, ಕಿರಿಯ ತಾಂತ್ರಿಕರು–ರೆಫ್ರಿಜರೇಷನ್, ಕಿರಿಯ ತಾಂತ್ರಿಕರು–ಬಾಯ್ಲರ್ ಅಟೆಂಡೆಂಟ್.

ಒಟ್ಟು ಹುದ್ದೆಗಳ ಸಂಖ್ಯೆ: 194

ಹುದ್ದೆಗಳ ಸಂಖ್ಯೆ ಮತ್ತು ವೇತನ :
ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ) (17 ಹುದ್ದೆಗಳು) : 52650-97100/-
ಸಹಾಯಕ ವ್ಯವಸ್ಥಾಪಕರು (ಆಡಳಿತ) (1ಹುದ್ದೆ) : 52650-97100/-
ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್) (3ಹುದ್ದೆಗಳು) : 52650-97100/-
ಎಂಐಎಸ್/ ಸಿಸ್ಟಂ ಆಫೀಸರ್ (1ಹುದ್ದೆ) : 43100-83900/-
ಮಾರುಕಟ್ಟೆ ಅಧಿಕಾರಿ (2 ಹುದ್ದೆಗಳು): 43100-83900/-
ತಾಂತ್ರಿಕ ಅಧಿಕಾರಿ (ಅಭಿಯಂತರ) (2 ಹುದ್ದೆಗಳು) : 43100-83900/-
ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) (2 ಹುದ್ದೆಗಳು): 43100-83900/-
ತಾಂತ್ರಿಕ ಅಧಿಕಾರಿ (ಡಿಟಿ) (14 ಹುದ್ದೆಗಳು): 43100-83900/-
ಕೆಮಿಸ್ಟ್ ದರ್ಜೆ-1 (4 ಹುದ್ದೆಗಳು): 33450-62600/-
ವಿಸ್ತರಣಾಧಿಕಾರಿ ದರ್ಜೆ-3 (17 ಹುದ್ದೆಗಳು) : 33450-62600/-
ಆಡಳಿತ ಸಹಾಯಕ ದರ್ಜೆ-2 (17 ಹುದ್ದೆಗಳು) : 27650-52650/-
ಲೆಕ್ಕ ಸಹಾಯಕ ದರ್ಜೆ-2 (12 ಹುದ್ದೆಗಳು) : 27650-52650/-
ಮಾರುಕಟ್ಟೆ ಸಹಾಯಕ ದರ್ಜೆ-2 (10 ಹುದ್ದೆಗಳು) : 27650-52650/-
ಕೆಮಿಸ್ಟ್ ದರ್ಜೆ-2 (28 ಹುದ್ದೆಗಳು): 27650-52650/-
ಕಿರಿಯ ಸಿಸ್ಟಂ ಆಪರೇಟರ್ (13 ಹುದ್ದೆಗಳು): 27650-52650/-
ಶೀಘ್ರಲಿಪಿಗಾರರು ದರ್ಜೆ-2 (1 ಹುದ್ದೆ): 27650-52650/-
ಕಿರಿಯ ತಾಂತ್ರಿಕರು (25 ಹುದ್ದೆಗಳು) : 21400-42000/-

ಶೈಕ್ಷಣಿಕ ಅರ್ಹತೆ: 10th/Degree
ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ) – ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನೆ ವಿಷಯದಲ್ಲಿ (ಬಿ.ವಿ.ಎಸ್ಸಿ ಅಂಡ್ ಎಹೆಚ್) ಪದವಿಯನ್ನು ಹೊಂದಿರಬೇಕು.

ಸಹಾಯಕ ವ್ಯವಸ್ಥಾಪಕರು (ಆಡಳಿತ) – ಮಾನವ ಸಂಪನ್ಮೂಲ ವಿಷಯದಲ್ಲಿ 02 ವರ್ಷಗಳ ಪೂರ್ಣಾವಧಿ ಎಂಬಿಎ ಜೊತೆಗೆ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಆಡಳಿತ ನಿರ್ವಹಣೆಯಲ್ಲಿ 03 ವರ್ಷಗಳ ಸೇವಾನುಭವ ಹಾಗೂ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್) – ಕೃಷಿ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ (ಅಗ್ರಿ) ಪದವಿ ಹೊಂದಿರಬೇಕು.

ಎಂಐಎಸ್/ ಸಿಸ್ಟಂ ಆಫೀಸರ್ – ಬಿಇ ಕಂಪ್ಯೂಟರ್ ಸೈನ್ಸ್/ ಇನ್ ಫಾರ್ಮೇಷನ್ ಸೈನ್ಸ್ ಪದವಿಯನ್ನು ಹೊಂದಿರಬೇಕು.

ಮಾರುಕಟ್ಟೆ ಅಧಿಕಾರಿ – ಬಿ.ಕಾಂ/ ಬಿ.ಎಸ್ಸಿ/ ಬಿ.ಬಿ.ಎಂ ಪದವಿ ಜೊತೆಗೆ ಮಾರುಕಟ್ಟೆಯಲ್ಲಿ 3 ವರ್ಷಗಳ ಅನುಭವ ಹೊಂದಿರಬೇಕು.

ತಾಂತ್ರಿಕ ಅಧಿಕಾರಿ (ಅಭಿಯಂತರ) ಮೆಕಾನಿಕಲ್ – ಬಿಇ (ಮೆಕಾನಿಕಲ್) ಪದವಿ ಹೊಂದಿರಬೇಕು.

ತಾಂತ್ರಿಕ ಅಧಿಕಾರಿ (ಅಭಿಯಂತರ) ಎಲೆಕ್ಟ್ರಿಕಲ್ – ಬಿಇ (ಎಲೆಕ್ಟ್ರಿಕಲ್) ಪದವಿ ಹೊಂದಿರಬೇಕು.

ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) ಕೆಮಿಸ್ಟ್ರಿ – ಎಂ.ಎಸ್ಸಿ (ಕೆಮಿಸ್ಟ್ರಿ) ಸ್ನಾತಕೋತ್ತರ ಪದವಿ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) ಮೈಕ್ರೊಬಯಾಲಜಿ – ಎಂ.ಎಸ್ಸಿ (ಮೈಕ್ರೊಬಯಾಲಜಿ) ಸ್ನಾತಕೋತ್ತರ ಪದವಿ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

ತಾಂತ್ರಿಕ ಅಧಿಕಾರಿ (ಡಿಟಿ) – ಬಿ.ಟೆಕ್ (ಡೈರಿ ಟೆಕ್ನಾಲಜಿ) ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಕೆಮಿಸ್ಟ್ ದರ್ಜೆ 1, 2 (ಕೆಮಿಸ್ಟ್ರಿ) – ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ ವಿಷಯವನ್ನು ವ್ಯಾಸಂಗ ಮಾಡಿರಬೇಕು.

ಕೆಮಿಸ್ಟ್ ದರ್ಜೆ 1, 2 (ಮೈಕ್ರೊಬಯಾಲಜಿ) – ಬಿ.ಎಸ್ಸಿ ಪದವಿಯಲ್ಲಿ ಮೈಕ್ರೊಬಯಾಲಜಿ ವಿಷಯವನ್ನು ವ್ಯಾಸಂಗ ಮಾಡಿರಬೇಕು.

ವಿಸ್ತರಣಾಧಿಕಾರಿ ದರ್ಜೆ 3 – ಯಾವುದೇ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

ಆಡಳಿತ ಸಹಾಯಕ ದರ್ಜೆ 2 – ಬಿ.ಕಾಂ ಪದವಿಯೊಂದಿಗೆ ಟ್ಯಾಲಿ ಸರ್ಟಿಫಿಕೇಟ್ ಅಥವಾ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

ಲೆಕ್ಕ ಸಹಾಯಕ ದರ್ಜೆ 2 – ಬಿ.ಬಿ.ಎಂ ಪದವಿಯೊಂದಿಗೆ ಟ್ಯಾಲಿ ಸರ್ಟಿಫಿಕೇಟ್ ಅಥವಾ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

ಮಾರುಕಟ್ಟೆ ಸಹಾಯಕ ದರ್ಜೆ 2 – ಬಿಬಿಎಂ / ಬಿ.ಎಸ್ಸಿ/ ಬಿ.ಕಾಂ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

ಕಿರಿಯ ಸಿಸ್ಟಂ ಆಪರೇಟರ್ – ಯಾವುದೇ ಪದವಿಯೊಂದಿಗೆ ಕನಿಷ್ಠ 1 ವರ್ಷದ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ ಹಾಗೂ 3 ವರ್ಷಗಳ ಅನುಭವ ಹೊಂದಿರಬೇಕು.

ಶೀಘ್ರಲಿಪಿಗಾರರು ದರ್ಜೆ 2 – ಯಾವುದೇ ಪದವಿಯೊಂದಿಗೆ ಸೀನಿಯರ್ ಇಂಗ್ಲೀಷ್ ಮತ್ತು ಕನ್ನಡ ಶಾರ್ಟ್ ಹ್ಯಾಂಡ್ ನೊಂದಿಗೆ ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಿರ್ವಹಣೆ ಜ್ಞಾನ ಹೊಂದಿರಬೇಕು.

ಕಿರಿಯ ತಾಂತ್ರಿಕರು (ಎಲೆಕ್ಟ್ರಿಕಲ್) (ರೆಫ್ರಿಜರೇಷನ್) – ಎಸ್.ಎಸ್.ಎಲ್.ಸಿ ಯೊಂದಿಗೆ ಡೈರೆಕ್ಟೋರೇಟ್ ಜನರಲ್ ಆಫ್ ಎಂಪ್ಲಾಯ್ಮೆಂಟ್ ಅಂಡ್ ಟ್ರೈನಿಂಗ್ ಇವರಿಂದ ಆಯಾ ಟ್ರೇಡ್ ನಲ್ಲಿ ತೇರ್ಗಡೆ ಹೊಂದಿ ಕಡ್ಡಾಯವಾಗಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಅಥವಾ ಎನ್.ಸಿ.ವಿ.ಟಿ ಸರ್ಟಿಫಿಕೇಟ್ ಹೊಂದಿರತಕ್ಕದ್ದು.

ಕಿರಿಯ ತಾಂತ್ರಿಕರು (ಬಾಯ್ಲರ್ ಅಟೆಂಡೆಂಟ್) ಎಸ್.ಎಸ್.ಎಲ್.ಸಿ ಯೊಂದಿಗೆ ಬಾಯ್ಲರ್ ಅಟೆಂಡೆಂಟ್ ದರ್ಜೆ 2 ರ ಪ್ರಮಾಣ ಪತ್ರ ಪಡೆದಿರಬೇಕು.

ವಯೋಮಿತಿ ಅರ್ಹತೆಗಳು: ಕನಿಷ್ಠ 18 ವರ್ಷ
• ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ

ಅರ್ಜಿ ಶುಲ್ಕ :
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ : 500/-
ಇತರೆ ಎಲ್ಲ ಕೆಟಗರಿ ಅಭ್ಯರ್ಥಿಗಳಿಗೆ : 750/-
ಅಪ್ಲಿಕೇಶನ್‌ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿ ಮಾಡಬಹುದು.

ಆಯ್ಕೆ ವಿಧಾನ : ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ. 85ಕ್ಕೆ ಇಳಿಸಿ ಹಾಗೆ ಪ್ರಾಪ್ತವಾಗುವ ಅಂಕಗಳಿಗೆ ಮೌಖಿಕ ಸಂದರ್ಶನದಲ್ಲಿ ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಿ ಮೆರಿಟ್ ಹಾಗೂ ಮೀಸಲಾತಿ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ Notification ಅನ್ನು ಗಮನವಿಟ್ಟು ಓದಿ, ಹುದ್ದೆಗೆ ನಿಗದಿಪಡಿಸಿರುವ ಇತರೆ ಎಲ್ಲಾ ಅರ್ಹತೆಯನ್ನು ಅಭ್ಯರ್ಥಿಯು ಪೂರೈಸುತ್ತಿದ್ದರೆ, ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
1. ಇಲಾಖೆಯ Official Site ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ Application ತೆರೆದುಕೊಳ್ಳಿ.
2. Application ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
3. Application ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು Upload ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ Upload ಮಾಡಿ (ಅಗತ್ಯವಿದ್ದರೆ ಮಾತ್ರ).
4. ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.


KMF SHIMUL Recruitment 2023_Important Dates

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01.02.2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03.03.2023

KMF SHIMUL Recruitment 2023_Important Links

ವೆಬ್ ಸೈಟ್: https://www.shimul.coop/

ಅಧಿಸೂಚನೆ: https://virtualofficeerp.com/shimul_2023/uploads/files/notification/1plvtj.pdf

ಅರ್ಜಿ ಲಿಂಕ್: https://virtualofficeerp.com/shimul_2023/instruction


Spread the love

Leave a Comment