ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೇಮಕಾತಿ: KKRTC Recruitment 2024

Spread the love

KKRTC Recruitment 2024

KKRTC Apprentice Recruitment 2024:  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ರಾಯಚೂರು ವಿಭಾಗದಲ್ಲಿ ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KKRTC ಉದ್ಯೋಗ ವಿವರ: 2024

ಇಲಾಖೆ ಹೆಸರು: KKRTC

ಹುದ್ದೆಯ ಹೆಸರು:ಅಪ್ರೆಂಟಿಸ್ (ಆಟೋ ಮೆಕಾನಿಕ್, ಆಟೋ ವಿದ್ಯುತ್, ಆಟೋ ವೆಲ್ಡರ್, ಆಟೋ ಬಾಡಿ ಫಿಟ್ಟರ್, ಆಟೋ ಪೇಂಟರ್, ಆಟೋ ಮಷಿನಿಸ್ಟ್)

ತರಬೇತಿ ಸ್ಥಳ : ಶಿಶಿಕ್ಷು ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ರಾಯಚೂರು ವಿಭಾಗದ ರಾಯಚೂರು ಘಟಕ-2, ರಾಯಚೂರು ಘಟಕ-3/ ಲಿಂಗಸೂರು ಘಟಕ/ ಸಿಂಧನೂರು ಘಟಕ/ ಮಾನವಿ ಘಟಕ/ ದೇವದುರ್ಗ ಘಟಕ/ ಮಸ್ಕಿ ಘಟಕ/ ವಿಭಾಗೀಯ ಕಾರ್ಯಾಗಾರಗಳಿಗೆ ನಿಯೋಜಿಸಿದ ಯಾವುದೇ ಸ್ಥಳದಲ್ಲಿ ತರಬೇತಿ ಪಡೆಯಲು ಸಿದ್ಧರಿರಬೇಕು.

ಹುದ್ದೆಗಳ ಸಂಖ್ಯೆ:133

ವೃತ್ತಿಯ ಹೆಸರು ಹುದ್ದೆಗಳ ಸಂಖ್ಯೆ
ಆಟೋ ಮೆಕಾನಿಕ್– 46
ಆಟೋ ವಿದ್ಯುತ್– 28
ಆಟೋ ವೆಲ್ಡರ್ -20
ಆಟೋ ಬಾಡಿ ಫಿಟ್ಟರ್– 20
ಆಟೋ ಪೇಂಟರ್ -10
ಆಟೋ ಮಷಿನಿಸ್ಟ್– 9

ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಆಟೋ ಮೆಕಾನಿಕ್, ಆಟೋ ವಿದ್ಯುತ್, ಆಟೋ ವೆಲ್ಡರ್, ಆಟೋ ಬಾಡಿ ಫಿಟ್ಟರ್, ಆಟೋ ಪೇಂಟರ್, ಆಟೋ ಮಷಿನಿಸ್ಟ್ ಸಂಬಂಧಿಸಿದ ವೃತ್ತಿಗಳಲ್ಲಿ I.T.I ಉತ್ತೀರ್ಣರಾಗಿರಬೇಕು.

ವಯೋಮಿತಿ ಅರ್ಹತೆಗಳು:
ಕನಿಷ್ಟ – 18 ವರ್ಷ
ಗರಿಷ್ಟ – 40ವರ್ಷ

ಆಯ್ಕೆ ವಿಧಾನ : ದಾಖಲೆಗಳ ಪರಿಶೀಲನೆ, ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ಸಂದರ್ಶನ ನಡೆಯುವ ಸ್ಥಳ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಿಭಾಗೀಯ ಕಛೇರಿ, ರಾಯಚೂರು ವಿಭಾಗ, ರಾಯಚೂರು

ನೇರ ಸಂದರ್ಶನ ದಿನಾಂಕದ ವಿವರ :
ಅಭ್ಯರ್ಥಿಗಳು ಮೌಖಿಕ ಸಂದರ್ಶನಕ್ಕೆ ಹಾಜರಾಗುವ ದಿನಾಂಕ : 11.01. 2024 ಬೆಳಿಗ್ಗೆ 10.00 ಘಂಟೆಗೆ

ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಓದಿ.

KKRTC Recruitment 2024_ Important Links

ಅಧಿಸೂಚನೆ: https://drive.google.com/file/d/1GzEEFPxDZsz5Ed9RZY9CWrJDulhSIl68/view?usp=drivesdk

ಅರ್ಜಿ ಲಿಂಕ್ : https://www.apprenticeshipindia.gov.in/

Join Telegram Channel & WhatsApp group for Daily Updates


Spread the love

Leave a Comment