ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೇಮಕಾತಿ: KKRTC Recruitment 2022

Spread the love

KKRTC Recruitment 2022

KKRTC Recruitment 2022 : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

KKRTC ಉದ್ಯೋಗ ವಿವರ

ಇಲಾಖೆ ಹೆಸರು: KKRTC

ಹುದ್ದೆಯ ಹೆಸರು: ಕುಶಲಕರ್ಮಿ (ಆಟೋ ಮೆಕ್ಯಾನಿಕ್, ಆಟೋ ಬಾಡಿ ಬಿಲ್ಡರ್, ಆಟೋ ವೆಲ್ಡರ್, ಆಟೋ ಪೇಂಟರ್, ಆಟೋ ಎಲೆಕ್ಟ್ರಿಷಿಯನ್), ತಾಂತ್ರಿಕ ಸಹಾಯಕ, ಸಹಾಯಕ ಸಂಚಾರ ನಿರೀಕ್ಷಕ, ಕ.ರಾ.ಸಾ. ಪೇದೆ, ಸಹಾಯಕ ಲೆಕ್ಕಿಗ

ಹುದ್ದೆಗಳ ಸಂಖ್ಯೆ: 36

ಅರ್ಜಿ ಸಲ್ಲಿಸುವ ಬಗೆ : online

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 26.08.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18.09.2022

KKRTC Recruitment Salary:
ಕುಶಲಕರ್ಮಿ : 13970-20740/-
ತಾಂತ್ರಿಕ ಸಹಾಯಕ : 11640-15700/-
ಸಹಾಯಕ ಸಂಚಾರ ನಿರೀಕ್ಷಕ : 13970-20740/-
ಕ.ರಾ.ಸಾ. ಪೇದೆ : 11640-15700/-
ಸಹಾಯಕ ಲೆಕ್ಕಿಗ : 14970-26670/-

ವಿದ್ಯಾರ್ಹತೆ : 10th,ITI, PUC , Diploma

ಕುಶಲಕರ್ಮಿ (ಆಟೋ ಮೆಕ್ಯಾನಿಕ್, ಆಟೋ ಬಾಡಿ ಬಿಲ್ಡರ್, ಆಟೋ ವೆಲ್ಡರ್, ಆಟೋ ಪೇಂಟರ್) – ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್/ ಆಟೋಮೊಬೈಲ್/ ವೆಲ್ಡಿಂಗ್ ಮತ್ತು ಶೀಟ್ ಮೆಟಲ್ ಟೆಕ್ನಾಲಜಿಯಲ್ಲಿ 3 ವರ್ಷದ ಇಂಜಿನಿಯರಿಂಗ್ ಡಿಪ್ಲೋಮಾ ಪಡೆದಿರಬೇಕು. ಚಾಲ್ತಿಯಲ್ಲಿರುವ ಭಾರಿ ಪ್ರಯಾಣಿಕರ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು ಅಥವಾ ಪರೀಕ್ಷಾರ್ಥ ಅವಧಿ ಮುಗಿಯುವುದರೊಳಗೆ ಹೊಂದತಕ್ಕದ್ದು.
ಕುಶಲಕರ್ಮಿ (ಆಟೋ ಎಲೆಕ್ಟ್ರಿಷಿಯನ್) – ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ ಮೆಕ್ಯಾಟ್ರಾನಿಕ್ಸ್ ಇಂಜಿನಿಯರಿಂಗ್/ ರೆಫ್ರಿಜರೇಷನ್ ಮತ್ತು ಏರ್ ಕಂಡೀಷನಿಂಗ್ ನಲ್ಲಿ 3 ವರ್ಷಗಳ ಇಂಜಿನಿಯರಿಂಗ್ ಡಿಪ್ಲೋಮಾ ಪಡೆದಿರಬೇಕು. ಚಾಲ್ತಿಯಲ್ಲಿರುವ ಭಾರಿ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು ಅಥವಾ ಪರೀಕ್ಷಾರ್ಥ ಅವಧಿ ಮುಗಿಯುವುದರೊಳಗೆ ಹೊಂದತಕ್ಕದ್ದು.
ತಾಂತ್ರಿಕ ಸಹಾಯಕ – ಪ್ರೌಢ ಶಿಕ್ಷಣ ಮಂಡಳಿಯಿಂದ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ನಂತರ ತಾಂತ್ರಿಕ ಮಂಡಳಿ ಅಥವಾ ಸರ್ಕಾರದಿಂದ ಅಂಗೀಕೃತವಾದ ಸಂಸ್ಥೆಯಲ್ಲಿ ಐ.ಟಿ.ಸಿ/ ಐ.ಟಿ.ಐ/ ಎನ್.ಎ.ಸಿ.ಯಲ್ಲಿ ಮೆಕ್ಯಾನಿಕ್ (ಮೋಟಾರ್ ವೆಹಿಕಲ್) ಹಾಗೂ ಇನ್ನೀತರ ವೃತ್ತಿಗಳಲ್ಲಿ ಉತ್ತೀರ್ಣರಾಗಿರಬೇಕು. ಪರೀಕ್ಷಾರ್ಥ ಸೇವೆ ಪೂರ್ಣಗೊಳ್ಳುವುದರೊಳಗೆ ಲಘು ಮೋಟಾರು ವಾಹನ ಚಾಲನಾ ಪರವಾನಿಗೆಯನ್ನು ಹೊಂದತಕ್ಕದ್ದು.
ಸಹಾಯಕ ಸಂಚಾರ ನಿರೀಕ್ಷಕ – ಪದವಿ ಪೂರ್ವ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
ಕ.ರಾ.ಸಾ. ಪೇದೆ – ಪಿಯುಸಿ ಉತ್ತೀರ್ಣರಾಗಿರಬೇಕು ಅಥವಾ ಮಾಜಿ ಸೈನಿಕರಾಗಿದ್ದು, 2ನೇ ದರ್ಜೆ ಆರ್ಮಿ ಸರ್ಟಿಫಿಕೇಟ್ ಅಥವಾ ನೌಕಾದಳ/ ವಾಯುದಳದಲ್ಲಿ ತತ್ಸಮಾನ ದರ್ಜೆಯ ಸರ್ಟಿಫಿಕೇಟ್ ಹೊಂದಿರಬೇಕು.
ಸಹಾಯಕ ಲೆಕ್ಕಿಗ – ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೂರು ವರ್ಷಗಳ ವಾಣಿಜ್ಯ ಪದವಿ ಹೊಂದಿರಬೇಕು. ಗಣಕಯಂತ್ರ ಜ್ಞಾನ ಹೊಂದಿರಬೇಕು ವಿದ್ಯಾರ್ಹತೆ ಸಂಪೂರ್ಣ ಮಾಹಿತಿಗಾಗಿ ಅಧಿಸೂಚನೆ ಓದಿರಿ

ವಯೋಮಿತಿ ಅರ್ಹತೆಗಳು:
ಕನಿಷ್ಟ – 18 ವರ್ಷ
ಗರಿಷ್ಟ – 40ವರ್ಷ



ಆಯ್ಕೆ ಪ್ರಕ್ರಿಯೆ: ಅ) ಸಾಮಾನ್ಯ ಸಾಮರ್ಥ್ಯ ಪರೀಕ್ಷೆ (ಎಲ್ಲಾ ಅಭ್ಯರ್ಥಿಗಳಿಗೆ), ಬ) ಮೂಲ ದಾಖಲಾತಿ (ಸಹಾಯಕ ಲೆಕ್ಕಿಗ ಹುದ್ದೆಗೆ), ದೇಹದಾರ್ಢ್ಯತೆ ಪರಿಶೀಲನೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ (ಸಹಾಯಕ ಲೆಕ್ಕಿಗ ಹೊರತುಪಡಿಸಿ ಉಳಿದ ಹುದ್ದೆಗೆ) ಅರ್ಹಗೊಂಡ ಅಭ್ಯರ್ಥಿಗಳನ್ನು ಆಯಾ ಹುದ್ದೆಗೆ ನಿಗದಿಪಡಿಸಲಾದ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಪಡೆದ ಒಟ್ಟು ಅಂಕಗಳ ಶೇಕಡಾ 25 ರಷ್ಟು ಮತ್ತು ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡಾ 75 ರಷ್ಟು ಅಂಕಗಳನ್ನು ಕ್ರೋಢೀಕರಿಸಿ ಮೆರಿಟ್ ಮತ್ತು ಮೀಸಲಾತಿ ಅನುಸಾರ ಆಯ್ಕೆ ಮಾಡಲಾಗುವುದು.


ಅರ್ಜಿ ಶುಲ್ಕ : 300/-

 

KKRTC Recruitment 2022_ Important Links

ಅಧಿಸೂಚನೆ (Residual): https://kkrtcjobs.karnataka.gov.in/02_2022_notification.pdf

ಅಧಿಸೂಚನೆ (Local) :  https://kkrtcjobs.karnataka.gov.in/01_2022_notification.pdf

ಅರ್ಜಿ ಲಿಂಕ್ :  https://kkrtcjobs.karnataka.gov.in/index.php

Join Our Telegram Channel


Spread the love

1 thought on “ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೇಮಕಾತಿ: KKRTC Recruitment 2022”

Leave a Comment