District Court Recruitment 2022
District Court Recruitment 2022 : ರಾಮನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
ಉದ್ಯೋಗ ವಿವರ
ಇಲಾಖೆ ಹೆಸರು: District Court Ramanagar
ಹುದ್ದೆಯ ಹೆಸರು: ಆದೇಶ ಜಾರಿಕಾರರು (6 ಹುದ್ದೆಗಳು) ಹಾಗೂ ಜವಾನರು (21 ಹುದ್ದೆಗಳು)
ಒಟ್ಟು ಹುದ್ದೆಗಳ ಸಂಖ್ಯೆ: 27
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 16.08.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20.09.2022
ಶುಲ್ಕ ಪಾವತಿಸಲು ಕೊನೆ ದಿನಾಂಕ: 20.09.2022
District Court Recruitment Salary
ಆದೇಶ ಜಾರಿಕಾರರು : 19950-37900/-
ಜವಾನ : 17000-28950/-
ವಿದ್ಯಾರ್ಹತೆ :
ಆದೇಶ ಜಾರಿಕಾರ ಹುದ್ದೆಗೆ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕನ್ನಡ ಭಾಷೆ ಓದಲು, ಬರೆಯಲು ಬರಬೇಕು. ಲಘು ವಾಹನ ಚಾಲನಾ ಪರವಾನಗಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ಜವಾನ ಹುದ್ದೆಗೆ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕನ್ನಡ ಭಾಷೆ ಓದಲು, ಬರೆಯಲು ಬರಬೇಕು.
ವಯೋಮಿತಿ ಅರ್ಹತೆಗಳು: ಕನಿಷ್ಟ ವಯೋಮಿತಿ – 18 ವರ್ಷ
ಗರಿಷ್ಟ ವಯೋಮಿತಿ
ಸಾಮಾನ್ಯ ವರ್ಗ – 35 ವರ್ಷ
ಪ್ರವರ್ಗ 2A,2B,3A,3B – 38 ವರ್ಷ
SC,ST, ಪ್ರವರ್ಗ 1 – 40 ವರ್ಷ
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ – 200/-
2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – 100/-
ಎಸ್ಸಿ, ಎಸ್ಟಿ, ಪ್ರವರ್ಗ 1, ಅಂಗವಿಕಲ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕವಿಲ್ಲ
ಶುಲ್ಕ ಪಾವತಿಸುವ ವಿಧಾನ: ಅಭ್ಯರ್ಥಿಗಳು ಆನ್ಲೈನ್ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು. ಅಥವಾ ಜಿಲ್ಲಾ ನ್ಯಾಯಾಲಯದ ವೆಬ್ಸೈಟ್ ನಿಂದ ಚಲನ್ ಪ್ರಿಂಟ್ ತೆಗೆದು ಎಸ್.ಬಿ.ಐ ಬ್ಯಾಂಕಿನ ಯಾವುದೇ ಶಾಖೆಗಳಲ್ಲಿ ಶುಲ್ಕ ಪಾವತಿಸಬಹುದು.
ಆಯ್ಕೆ ವಿಧಾನ : ಆದೇಶ ಜಾರಿಕಾರ, ಜವಾನ ಹುದ್ದೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
District Court Recruitment 2022_Important Links
ಅಧಿಸೂಚನೆ ( ಆದೇಶ ಜಾರಿಕಾರರು): https://districts.ecourts.gov.in/sites/default/files/Proces%20Server_compressed.pdf
ಅಧಿಸೂಚನೆ (ಜವಾನರು): https://districts.ecourts.gov.in/sites/default/files/Peon_compressed.pdf
ಅರ್ಜಿ ಲಿಂಕ್ : https://districts.ecourts.gov.in/ramanagara-onlinerecruitment