KEA Recruitment 2025
KEA Recruitment 2025 : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
KEA Recruitment 2025_ ಉದ್ಯೋಗ ವಿವರ
ಅರ್ಜಿ ಸಲ್ಲಿಸುವ ಬಗೆ : online
ಸಂಸ್ಥೆ :
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಹುದ್ದೆ :
ಪ್ರಥಮ ದರ್ಜೆ ಸಹಾಯಕರು (ಪ್ರಥಮ ದರ್ಜೆ ಕೋರ್ಟ್ ಕ್ಲರ್ಕ್/ ರೆವಿನ್ಯೂ ಇನ್ಸ್‌ಪೆಕ್ಟರ್), ದ್ವಿತೀಯ ದರ್ಜೆ ಸಹಾಯಕರು.
ಸಂಸ್ಥೆ :
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್.
ಹುದ್ದೆ :
ಕಿರಿಯ ಅಧಿಕಾರಿ (ಗುಣ ಮತ್ತು ಆಶ್ವಾಸನೆ), ಕಿರಿಯ ಅಧಿಕಾರಿ (ಉತ್ಪಾದನೆ ಮತ್ತು ನಿರ್ವಹಣೆ), ಕಿರಿಯ ಅಧಿಕಾರಿ (ಸಾಮಗ್ರಿ/ ಉಗ್ರಾಣ ವಿಭಾಗ), ಮಾರಾಟ ಪ್ರತಿನಿಧಿ, ಆಪರೇಟರ್ (ಸೆಮಿ ಸ್ಕಿಲ್ಡ್).
ಸಂಸ್ಥೆ :
ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು
ಹುದ್ದೆ :
ಜೂನಿಯರ್ ಪ್ರೋಗ್ರಾಮರ್, ಸಹಾಯಕ ಇಂಜಿನಿಯರ್ (ಸಿವಿಲ್), ಸಹಾಯಕ ಗ್ರಂಥಪಾಲಕ, ಸಹಾಯಕ, ಕಿರಿಯ ಸಹಾಯಕ.
ಸಂಸ್ಥೆ :
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ಹುದ್ದೆ :
ಸಹಾಯಕ ಲೆಕ್ಕಿಗ, ನಿರ್ವಾಹಕ
ಸಂಸ್ಥೆ :
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ.
ಹುದ್ದೆ :
ಸಹಾಯಕ ಸಂಚಾರ ನಿರೀಕ್ಷಕ
ಇಲಾಖೆ :
ಕೃಷಿ ಮಾರಾಟ ಇಲಾಖೆ
ಹುದ್ದೆ :
ಸಹಾಯಕ ಅಭಿಯಂತರರು (ಸಿವಿಲ್), ಕಿರಿಯ ಅಭಿಯಂತರರು (ಸಿವಿಲ್), ಮಾರುಕಟ್ಟೆ ಮೇಲ್ವಿಚಾರಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಮಾರಾಟ ಸಹಾಯಕರು.
ಇಲಾಖೆ :
ತಾಂತ್ರಿಕ ಶಿಕ್ಷಣ ಇಲಾಖೆ
ಹುದ್ದೆ :
ಪ್ರಥಮ ದರ್ಜೆ ಸಹಾಯಕರು
ಇಲಾಖೆ :
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)
ಹುದ್ದೆ :
ಗ್ರಂಥಪಾಲಕ
ಖಾಲಿಯಿರುವ ಹುದ್ದೆಗಳ ಸಂಖ್ಯೆ : 705
ಕರ್ತವ್ಯ ಸ್ಥಳ :
ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.
ಶೈಕ್ಷಣಿಕ ಅರ್ಹತೆ :
* ಪ್ರಥಮ ದರ್ಜೆ ಸಹಾಯಕರು & ಸಹಾಯಕ – ಪದವಿ ವಿದ್ಯಾರ್ಹತೆ.
* ದ್ವಿತೀಯ ದರ್ಜೆ ಸಹಾಯಕ & ಮಾರಾಟ ಸಹಾಯಕ & ಕಿರಿಯ ಸಹಾಯಕ – ದ್ವಿತೀಯ ಪಿಯುಸಿ ಅಥವಾ ತತ್ಸಮಾನ.
* ಸಹಾಯಕ ಸಂಚಾರ ನಿರೀಕ್ಷಕ – ದ್ವಿತೀಯ ಪಿಯುಸಿ ಅಥವಾ ಮೂರು ವರ್ಷದ ಡಿಪ್ಲೊಮಾ.
* ನಿರ್ವಾಹಕ – ದ್ವಿತೀಯ ಪಿಯುಸಿ ಅಥವಾ ಮೂರು ವರ್ಷದ ಡಿಪ್ಲೊಮಾ ಅರ್ಹತೆ ಜೊತೆಗೆ ಮೋಟಾರು ವಾಹನ ಕಂಡಕ್ಟರ್ ಪರವಾನಗಿ ಮತ್ತು ಬ್ಯಾಡ್ಜ್ ಹೊಂದಿರಬೇಕು.
* ಸಹಾಯಕ ಲೆಕ್ಕಿಗ – ವಾಣಿಜ್ಯಶಾಸ್ತ್ರದ 3 ವರ್ಷಗಳ ಬ್ಯಾಚುಲರ್ ಪದವಿ.
* ಕಿರಿಯ ಅಧಿಕಾರಿ – ಎಂ.ಎಸ್ಸಿ ಕೆಮಿಸ್ಟ್ರಿ/ ಬಿ.ಇ/ ಬಿ.ಟೆಕ್/ ಎಂ.ಬಿ.ಎ.
* ಮಾರಾಟ ಪ್ರತಿನಿಧಿ – ಯಾವುದೇ ಪದವಿ.
* ಸಹಾಯಕ ಗ್ರಂಥಪಾಲಕ – ಲೈಬ್ರರಿ ಸೈನ್ಸ್ ಸ್ನಾತಕೋತ್ತರ ಪದವಿ.
* ಗ್ರಂಥಪಾಲಕ – M.Lib Sc/ Mli.Sc.
* ಆಪರೇಟರ್ (ಸೆಮಿ ಸ್ಕಿಲ್ಡ್-ಫಿಟ್ಟರ್) – ಎಸ್.ಎಸ್.ಎಲ್.ಸಿ ಜೊತೆಗೆ ಐಟಿಐ.
* ಜೂನಿಯರ್ ಪ್ರೋಗ್ರಾಮರ್ – ಇಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್/ ಎಂ.ಸಿ.ಎ.
* ಸಹಾಯಕ ಇಂಜಿನಿಯರ್ (ಸಿವಿಲ್) – ಸಿವಿಲ್ ಇಂಜಿನಿಯರಿಂಗ್.
* ಸಹಾಯಕ ಅಭಿಯಂತರರು (ಸಿವಿಲ್) – ಬಿಇ (ಸಿವಿಲ್)
* ಕಿರಿಯ ಅಭಿಯಂತರರು (ಸಿವಿಲ್) – ಡಿಪ್ಲೊಮಾ (ಸಿವಿಲ್)
* ಮಾರುಕಟ್ಟೆ ಮೇಲ್ವಿಚಾರಕರು – ಬಿ.ಎಸ್ಸಿ ಪದವಿ.
ವಯೋಮಿತಿ :
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ಪೂರೈಸಿರಬೇಕು.
• ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ – ಗರಿಷ್ಠ 41 ವರ್ಷ
• SC, ST, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 43 ವರ್ಷ
ಆಯ್ಕೆ ವಿಧಾನ :
ಸ್ಪರ್ಧಾತ್ಮಕ ಪರೀಕ್ಷೆ (ಆಫ್‌ಲೈನ್-ಒಎಂಆರ್ ಮಾದರಿ) ನಡೆಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ :
• ಸಾಮಾನ್ಯ ಅರ್ಹತೆ, ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳು – ರೂ. 750
• SC, ST, ಪ್ರ 1, ಮಾಜಿ ಸೈನಿಕ, ತೃತೀಯ ಲಿಂಗ ಅಭ್ಯರ್ಥಿಗಳು – ರೂ. 500
• ವಿಕಲಚೇತನ ಅಭ್ಯರ್ಥಿಗಳು – ರೂ. 250
ಶುಲ್ಕ ಪಾವತಿಸುವ ವಿಧಾನ :
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಶುಲ್ಕ ಪಾವತಿಸಬಹುದು.
KEA Recruitment 2025_ Important Dates
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ (ಉಳಿಕೆ ಮೂಲ ವೃಂದ) :
• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 08.10.2025
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31.10.2025
• ಶುಲ್ಕ ಪಾವತಿಸಲು ಕೊನೆಯ ದಿನಾಂಕ : 01.11. 2025
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ (ಕಲ್ಯಾಣ ಕರ್ನಾಟಕ ವೃಂದ) :
• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 09.10.2025
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10.11.2025
• ಶುಲ್ಕ ಪಾವತಿಸಲು ಕೊನೆಯ ದಿನಾಂಕ : 11.11.2025
KEA Recruitment 2025_ Important Link
ಅಧಿಸೂಚನೆ (NHK): https://cetonline.karnataka.gov.in/keawebentry456/vdptrecnhk2025/nhkkannada.pdf
ಅಧಿಸೂಚನೆ (HK): https://cetonline.karnataka.gov.in/keawebentry456/vdptrechk2025/HKkannada.pdf
ಅರ್ಜಿ ಲಿಂಕ್ (NHK) : https://cetonline.karnataka.gov.in/kea/vdptrecnhk2025
ಅರ್ಜಿ ಲಿಂಕ್ (HK) : https://cetonline.karnataka.gov.in/kea/vdptrechk2025