ESIC Recruitment 2023
ESIC Recruitment 2023 : ನೌಕರರ ರಾಜ್ಯ ವಿಮಾ ನಿಗಮದಲ್ಲಿ ಅಗತ್ಯವಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಗಮವು ಭಾರತದಾದ್ಯಂತ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಪ್ರತಿ ರಾಜ್ಯದ ಹುದ್ದೆಗಳ ಭರ್ತಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ರಾಜ್ಯದ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
ESIC Recruitment 2023 : ಉದ್ಯೋಗ ವಿವರ
ಹುದ್ದೆ : ಮೆಡಿಕಲ್ ರೆಕಾರ್ಡ್ ಅಸಿಸ್ಟೆಂಟ್, ಜೂನಿಯರ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ್, ರೇಡಿಯೋಗ್ರಾಫರ್, ಜೂನಿಯರ್ ರೇಡಿಯೋಗ್ರಾಫರ್, ECG ಟೆಕ್ನಿಷಿಯನ್, ಫಾರ್ಮಾಸಿಸ್ಟ್ (ಅಲೋಪತಿ), ಫಾರ್ಮಾಸಿಸ್ಟ್ (ಆಯುರ್ವೇದ), ಡೆಂಟಲ್ ಮೆಕ್ಯಾನಿಕ್, ಸೋಷಿಯಲ್ ಗೈಡ್/ ಸೋಷಿಯಲ್ ವರ್ಕರ್
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸೇರಿದಂತೆ ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.
ಒಟ್ಟು ಹುದ್ದೆಗಳ ಸಂಖ್ಯೆ : 1038 ಹುದ್ದೆಗಳು.
ಕರ್ನಾಟಕದಲ್ಲಿ ಹುದ್ದೆಗಳು: 57
ಶೈಕ್ಷಣಿಕ ಅರ್ಹತೆ :
ಮೆಡಿಕಲ್ ರೆಕಾರ್ಡ್ ಅಸಿಸ್ಟೆಂಟ್ – ದ್ವಿತೀಯ ಪಿಯುಸಿ ಜೊತೆಗೆ ಮೆಡಿಕಲ್ ರೆಕಾರ್ಡ್ ಟೆಕ್ನಿಷಿಯನ್ ಟ್ರೈನಿಂಗ್ ಸರ್ಟಿಫಿಕೇಟ್ ಹೊಂದಿರಬೇಕು. ಟೈಪಿಂಗ್ ಜ್ಞಾನ ಹೊಂದಿರಬೇಕು.
ಜೂನಿಯರ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ್ – ದ್ವಿತೀಯ ಪಿಯುಸಿ ಸೈನ್ಸ್ ಜೊತೆಗೆ ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ್ ಅರ್ಹತೆ ಹೊಂದಿರಬೇಕು. 1 ವರ್ಷದ ಅನುಭವ ಹೊಂದಿರಬೇಕು.
ರೇಡಿಯೋಗ್ರಾಫರ್ – ದ್ವಿತೀಯ ಪಿಯುಸಿ ಸೈನ್ಸ್ ಜೊತೆಗೆ ಡಿಪ್ಲೊಮಾ ಅಥವಾ ರೇಡಿಯೋಗ್ರಫಿ ಸರ್ಟಿಫಿಕೇಟ್ ಹೊಂದಿರಬೇಕು ಮತ್ತು 1 ವರ್ಷದ ಅನುಭವ ಹೊಂದಿರಬೇಕು.
ಜೂನಿಯರ್ ರೇಡಿಯೋಗ್ರಾಫರ್ – ದ್ವಿತೀಯ ಪಿಯುಸಿ ಸೈನ್ಸ್ ಜೊತೆಗೆ ಸರ್ಟಿಫಿಕೇಟ್ ಅಥವಾ ಡಿಪ್ಲೊಮಾ ಇನ್ ರೇಡಿಯೋಗ್ರಫಿ ಅರ್ಹತೆ ಹೊಂದಿರಬೇಕು.
ECG ಟೆಕ್ನಿಷಿಯನ್ – ದ್ವಿತೀಯ ಪಿಯುಸಿ ಸೈನ್ಸ್ ಜೊತೆಗೆ 2 ವರ್ಷಗಳ ಡಿಪ್ಲೊಮಾ ಇನ್ ECG ಅರ್ಹತೆ ಹೊಂದಿರಬೇಕು.
ಫಾರ್ಮಾಸಿಸ್ಟ್ (ಅಲೋಪತಿ) – ಫಾರ್ಮಸಿ ಪದವಿ ಅಥವಾ ಸೀನಿಯರ್ ಸೆಕೆಂಡರಿ ಜೊತೆಗೆ ಫಾರ್ಮಸಿಯಲ್ಲಿ ಡಿಪ್ಲೊಮಾ ಅರ್ಹತೆ ಹೊಂದಿರಬೇಕು.
ಫಾರ್ಮಾಸಿಸ್ಟ್ (ಆಯುರ್ವೇದ) – ದ್ವಿತೀಯ ಪಿಯುಸಿ ಸೈನ್ಸ್ ( ಫಿಸಿಕ್ಸ್/ ಕೆಮಿಸ್ಟ್ರಿ/ ಬಯಾಲಜಿ) ಅರ್ಹತೆ ಜೊತೆಗೆ ಆಯುರ್ವೇದದಲ್ಲಿ ಫಾರ್ಮಸಿ ಪದವಿ ಹೊಂದಿರಬೇಕು. ಒಂದು ವರ್ಷದ ಅನುಭವ ಹೊಂದಿರಬೇಕು.
ಡೆಂಟಲ್ ಮೆಕ್ಯಾನಿಕ್ – ದ್ವಿತೀಯ ಪಿಯುಸಿ ಅಥವಾ ವಿಜ್ಞಾನದೊಂದಿಗೆ ತತ್ಸಮಾನ ಅರ್ಹತೆ ಜೊತೆಗೆ ಡಿಪ್ಲೊಮಾ ಇನ್ ಡೆಂಟಲ್ ಮೆಕ್ಯಾನಿಕ್ ಅರ್ಹತೆ ಹೊಂದಿರಬೇಕು. ಡೆಂಟಲ್ ಕೌನ್ಸಿಲ್ ನಲ್ಲಿ ನೊಂದಣಿ ಆಗಿರಬೇಕು.
ಸೋಷಿಯಲ್ ಗೈಡ್/ ಸೋಷಿಯಲ್ ವರ್ಕರ್ – ಪದವಿ/ ಡಿಪ್ಲೊಮಾ ಇನ್ ಸೋಷಿಯಲ್ ವರ್ಕ್ ಅರ್ಹತೆ ಜೊತೆಗೆ ಒಂದು ವರ್ಷದ ಅನುಭವ ಹೊಂದಿರಬೇಕು
ವಯಸ್ಸಿನ ಮೀತಿ :
• ಮೆಡಿಕಲ್ ರೆಕಾರ್ಡ್ ಅಸಿಸ್ಟೆಂಟ್ – 18 ರಿಂದ 25 ವರ್ಷ
• ಜೂನಿಯರ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ್ – 18 ರಿಂದ 25 ವರ್ಷ
• ರೇಡಿಯೋಗ್ರಾಫರ್ – 18 ರಿಂದ 25 ವರ್ಷ
• ಜೂನಿಯರ್ ರೇಡಿಯೋಗ್ರಾಫರ್ – 18 ರಿಂದ 25 ವರ್ಷ
• ECG ಟೆಕ್ನಿಷಿಯನ್ – 18 ರಿಂದ 25 ವರ್ಷ
• ಫಾರ್ಮಾಸಿಸ್ಟ್ (ಅಲೋಪತಿ) – ಗರಿಷ್ಠ 32 ವರ್ಷ
• ಫಾರ್ಮಾಸಿಸ್ಟ್ (ಆಯುರ್ವೇದ) – 18 ರಿಂದ 25 ವರ್ಷ
• ಡೆಂಟಲ್ ಮೆಕ್ಯಾನಿಕ್ – 18 ರಿಂದ 25 ವರ್ಷ
• ಸೋಷಿಯಲ್ ಗೈಡ್/ ಸೋಷಿಯಲ್ ವರ್ಕರ್ – ಗರಿಷ್ಠ 37 ವರ್ಷ
ವಯೋಮಿತಿ ಸಡಿಲಿಕೆ :
• SC, ST ಅಭ್ಯರ್ಥಿಗಳಿಗೆ – 5 ವರ್ಷ
• OBC ಅಭ್ಯರ್ಥಿಗಳಿಗೆ – 3 ವರ್ಷ
• PWD ಅಭ್ಯರ್ಥಿಗಳಿಗೆ – 10 ವರ್ಷ
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಹಾಗೂ (ಟೈಪಿಂಗ್/ ಡಾಟಾ ಎಂಟ್ರಿ ಟೆಸ್ಟ್ – ಮೆಡಿಕಲ್ ರೆಕಾರ್ಡ್ ಅಸಿಸ್ಟೆಂಟ್) ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ನೇಮಕ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ :
• SC, ST, PWD, ಮಹಿಳಾ, ಮಾಜಿ ಸೈನಿಕ ಅಭ್ಯರ್ಥಿಗಳು – ರೂ. 250
• ಉಳಿದ ಅಭ್ಯರ್ಥಿಗಳು – ರೂ. 500
ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
ESIC Recruitment 2023 : Important Dates
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 01/10/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30/10/ 2023
ESIC Recruitment 2023 : Important Links
ಆಫಿಸಿಯಲ್ ವೆಬ್ ಸೈಟ್ : https://esic.gov.in/
ಅಧಿಸೂಚನೆ 1: https://esic.gov.in/attachments/recruitmentfile/6d4624f3e83efeee90585a624e36ba59.pdf
ಅರ್ಜಿ ಲಿಂಕ್ : https://ibpsonline.ibps.in/esicjan23/
ಅಧಿಸೂಚನೆಗಳು( other states): https://esic.gov.in/recruitments/index/page:3