SSC Recruitment 2023
SSC Recruitment 2023 : ಸ್ಟಾಫ್ ಸೆಲೆಕ್ಷನ್ ಕಮಿಷನ್ ನಿಂದ ಭಾರತದೆಲ್ಲೆಡೆ ವಿವಿಧ ಇಲಾಖೆಗಳಲ್ಲಿ ಅಗತ್ಯವಿರುವ ಜೂನಿಯರ್ ಇಂಜಿನಿಯರ್ (ಜೆಇ) ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
SSC Recruitment Job Details
ಇಲಾಖೆ ಹೆಸರು: SSC
ಹುದ್ದೆಯ ಹೆಸರು: ಜೂನಿಯರ್ ಇಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್ & ಇಲೆಕ್ಟ್ರಿಕಲ್)
ಹುದ್ದೆಗಳ ಸಂಖ್ಯೆ: 1324
ಅರ್ಜಿ ಸಲ್ಲಿಸುವ ಬಗೆ : online
ವೇತನ : ಮಾಸಿಕ ರೂ. 35,400 ರಿಂದ ರೂ. 1,12,400 ವೇತನ ನೀಡಲಾಗುತ್ತದೆ.
ವಿದ್ಯಾರ್ಹತೆ : ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ Diploma/Degree in Civil ,Electrical ,Mechanical engineering ಅರ್ಹತೆ ಹೊಂದಿರಬೇಕು.
ವಯೋಮಿತಿ ಅರ್ಹತೆಗಳು :
ದಿನಾಂಕ 01-08-2023ಕ್ಕೆ
• ಸೆಂಟ್ರಲ್ ಪಬ್ಲಿಕ್ ವರ್ಕ್ಸ ಡಿಪಾರ್ಟ್ಮೆಂಟ್ ಹುದ್ದೆಗಳಿಗೆ – ಗರಿಷ್ಠ 32 ವರ್ಷ
• ಉಳಿದ ಇಲಾಖೆ ಹುದ್ದೆಗಳಿಗೆ – ಗರಿಷ್ಠ 30 ವರ್ಷ
ಜಾತಿವರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಶುಲ್ಕ :
• ರೂ. 100 ಶುಲ್ಕವನ್ನು ಪಾವತಿಸಬೇಕು.
• SC/ST/Pwd, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
ಆಯ್ಕೆ ವಿಧಾನ : ಕಂಪ್ಯೂಟರ್ ಆಧಾರಿತ ಪರೀಕ್ಷೆ (ಪೇಪರ್-1, ಪೇಪರ್-2), ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ Notification ಅನ್ನು ಗಮನವಿಟ್ಟು ಓದಿ, ಹುದ್ದೆಗೆ ನಿಗದಿಪಡಿಸಿರುವ ಇತರೆ ಎಲ್ಲಾ ಅರ್ಹತೆಯನ್ನು ಅಭ್ಯರ್ಥಿಯು ಪೂರೈಸುತ್ತಿದ್ದರೆ, ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
1. ಇಲಾಖೆಯ Official Site ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ Application ತೆರೆದುಕೊಳ್ಳಿ.
2. Application ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
3. Application ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು Upload ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ Upload ಮಾಡಿ (ಅಗತ್ಯವಿದ್ದರೆ ಮಾತ್ರ).
4. ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
SSC Recruitment 2023_ Important Dates
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 26.07.2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 16.08.2023
ಅರ್ಜಿ ಶುಲ್ಕ ಸಲ್ಲಿಸಲು ಕೊನೆ ದಿನಾಂಕ : 17to18/8/2023
ಪರೀಕ್ಷೆ ದಿನಾಂಕ : October 2023
SSC Recruitment 2023_ Important Links
ಅಫಿಸಿಯಲ್ ವೆಬ್ ಸೈಟ್: https://ssc.nic.in/
ಅಧಿಸೂಚನೆ: https://ssc.nic.in/SSCFileServer/PortalManagement/UploadedFiles/NOTICE_JE_2023_26072023.pdf
ಅರ್ಜಿ ಲಿಂಕ್: https://ssc.nic.in/