ವಿವಿಧ ಬ್ಯಾಂಕಗಳಲ್ಲಿ ನೇಮಕಾತಿ: IBPS Recruitment 2023

Spread the love

IBPS Recruitment 2023

IBPS Recruitment 2022: ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯಿಂದ ವಿವಿಧ ಬ್ಯಾಂಕುಗಳಲ್ಲಿ ಅಗತ್ಯವಿರುವ ವಿವಿಧ ಆಫೀಸರ್ಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್‌ಸೈಟ್‌ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.


IBPS Recruitment 2023_ಉದ್ಯೋಗ ವಿವರ

ಇಲಾಖೆ ಹೆಸರು: IBPS

ಅರ್ಜಿ ಸಲ್ಲಿಸುವ ಬಗೆ : online

ಹುದ್ದೆಯ ಹೆಸರು: ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್), ಆಫೀಸರ್ ಸ್ಕೇಲ್ 1 (ಅಸಿಸ್ಟೆಂಟ್ ಮ್ಯಾನೇಜರ್), ಆಫೀಸರ್ ಸ್ಕೇಲ್ 2 ಜನರಲ್ ಬ್ಯಾಂಕಿಂಗ್ ಆಫೀಸರ್ (ಮ್ಯಾನೇಜರ್), ಆಫೀಸರ್ ಸ್ಕೇಲ್ 2 ಸ್ಪೆಷಲಿಸ್ಟ್ ಆಫೀಸರ್ಸ್ (ಮ್ಯಾನೇಜರ್) (ಐಟಿ ಆಫೀಸರ್, ಚಾರ್ಟರ್ಡ್ ಅಕೌಂಟೆಂಟ್, ಕಾನೂನು ಆಫೀಸರ್, ಟ್ರೆಜರಿ ಆಫೀಸರ್, ಮಾರ್ಕೆಟಿಂಗ್ ಆಫೀಸರ್, ಅಗ್ರಿಕಲ್ಚರ್ ಆಫೀಸರ್), ಆಫೀಸರ್ ಸ್ಕೇಲ್ 3 (ಸೀನಿಯರ್ ಮ್ಯಾನೇಜರ್)

ಒಟ್ಟು ಹುದ್ದೆಗಳ ಸಂಖ್ಯೆ: 8612

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ವಿವಿಧ ಬ್ಯಾಂಕುಗಳಲ್ಲಿ ಕೆಲಸ ನಿರ್ವಹಿಸಬೇಕು

ಶೈಕ್ಷಣಿಕ ಅರ್ಹತೆ:
ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಆಫೀಸರ್ ಸ್ಕೇಲ್ 1 (ಅಸಿಸ್ಟೆಂಟ್ ಮ್ಯಾನೇಜರ್) – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಆಫೀಸರ್ ಸ್ಕೇಲ್ 2 ಜನರಲ್ ಬ್ಯಾಂಕಿಂಗ್ ಆಫೀಸರ್ (ಮ್ಯಾನೇಜರ್) – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿಯಲ್ಲಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯಲ್ಲಿ ಕನಿಷ್ಠ ಸರಾಸರಿ ಶೇಕಡಾ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ 2 ವರ್ಷ ಆಫೀಸರ್ ಆಗಿ ಅನುಭವ ಹೊಂದಿರಬೇಕು.

ಆಫೀಸರ್ ಸ್ಕೇಲ್ 2 ಸ್ಪೆಷಲಿಸ್ಟ್ ಆಫೀಸರ್ಸ್ (ಮ್ಯಾನೇಜರ್)
ಐಟಿ ಆಫೀಸರ್ – ಇಲೆಕ್ಟ್ರಾನಿಕ್ಸ್/ ಕಮ್ಯುನಿಕೇಷನ್/ ಕಂಪ್ಯೂಟರ್ ಸೈನ್ಸ್/ ಐಟಿ ವಿಷಯದಲ್ಲಿ ಕನಿಷ್ಠ ಸರಾಸರಿ ಶೇಕಡಾ 50% ಅಂಕಗಳೊಂದಿಗೆ ಪದವಿ ಪಡೆದಿರಬೇಕು. 1 ವರ್ಷದ ಅನುಭವ ಹೊಂದಿರಬೇಕು.

ಚಾರ್ಟರ್ಡ್ ಅಕೌಂಟೆಂಟ್ – ಸಿಎ ಅರ್ಹತೆ ಹೊಂದಿರಬೇಕು. ಸಿಎ ಆಗಿ 1 ವರ್ಷದ ಅನುಭವ ಹೊಂದಿರಬೇಕು.

ಕಾನೂನು ಆಫೀಸರ್ – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಕನಿಷ್ಠ ಸರಾಸರಿ ಶೇಕಡಾ 50% ಅಂಕಗಳೊಂದಿಗೆ ಕಾನೂನು ಪದವಿ ಹೊಂದಿರಬೇಕು. 2 ವರ್ಷ ಅನುಭವ ಹೊಂದಿರಬೇಕು.

ಟ್ರೆಜರಿ ಆಫೀಸರ್ – ಸಿಎ ಅಥವಾ ಎಂಬಿಎ ಫೈನಾನ್ಸ್ ಅರ್ಹತೆ ಹೊಂದಿರಬೇಕು. 1 ವರ್ಷದ ಅನುಭವ ಹೊಂದಿರಬೇಕು.

ಮಾರ್ಕೆಟಿಂಗ್ ಆಫೀಸರ್ – ಎಂಬಿಎ ಮಾರ್ಕೆಟಿಂಗ್ ಅರ್ಹತೆ ಹೊಂದಿರಬೇಕು. 1 ವರ್ಷದ ಅನುಭವ ಹೊಂದಿರಬೇಕು.

ಅಗ್ರಿಕಲ್ಚರ್ ಆಫೀಸರ್ – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಕನಿಷ್ಠ ಸರಾಸರಿ ಶೇಕಡಾ 50% ಅಂಕಗಳೊಂದಿಗೆ ಅಗ್ರಿಕಲ್ಚರ್/ ಹೊರ್ಟಿಕಲ್ಚರ್/ ಡೈರಿ/ ಅನಿಮಲ್ ಹಸ್ಬಂಡರಿ/ ಫಾರೆಸ್ಟ್ರಿ/ ವೆಟರ್ನರಿ ಸೈನ್ಸ್/ ಅಗ್ರಿಕಲ್ಚರಲ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಅರ್ಹತೆ ಹೊಂದಿರಬೇಕು. 2 ವರ್ಷಗಳ ಅನುಭವ ಹೊಂದಿರಬೇಕು.

ಆಫೀಸರ್ ಸ್ಕೇಲ್ 3 (ಸೀನಿಯರ್ ಮ್ಯಾನೇಜರ್) – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿಯಲ್ಲಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯಲ್ಲಿ ಕನಿಷ್ಠ ಸರಾಸರಿ ಶೇಕಡಾ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.


ವಯೋಮಿತಿ ಅರ್ಹತೆಗಳು: 20 ರಿಂದ 30 ವರ್ಷ
ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) : 18 ರಿಂದ 28 ವರ್ಷ
ಆಫೀಸರ್ ಸ್ಕೇಲ್ 1 : 18 ರಿಂದ 30 ವರ್ಷ
ಆಫೀಸರ್ ಸ್ಕೇಲ್ 2 : 21 ರಿಂದ 32 ವರ್ಷ
ಆಫೀಸರ್ ಸ್ಕೇಲ್ 3 : 21 ರಿಂದ 40 ವರ್ಷ
(SC/ST ಅಭ್ಯರ್ಥಿಗಳಿಗೆ 5 ವರ್ಷ,
OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತುಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 10 ವರ್ಷ ವಯೋಮಿತಿ ಸಡಲಿಕೆ ನಿಯಮಗಳು ಅನ್ವಯವಾಗಲಿವೆ)

ಅರ್ಜಿ ಶುಲ್ಕ :
ಪ.ಜಾತಿ/ ಪ.ಪಂ./ ಪಿಡಬ್ಲ್ಯೂಡಿ ಅಭ್ಯರ್ಥಿಗಳು – ರೂ. 175
ಉಳಿದ ಅಭ್ಯರ್ಥಿಗಳು – ರೂ. 850


ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಆಯ್ಕೆ ವಿಧಾನ :ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ Notification ಅನ್ನು ಗಮನವಿಟ್ಟು ಓದಿ, ಹುದ್ದೆಗೆ ನಿಗದಿಪಡಿಸಿರುವ ಇತರೆ ಎಲ್ಲಾ ಅರ್ಹತೆಯನ್ನು ಅಭ್ಯರ್ಥಿಯು ಪೂರೈಸುತ್ತಿದ್ದರೆ, ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
1. ಇಲಾಖೆಯ Official Site ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ Application ತೆರೆದುಕೊಳ್ಳಿ.
2. Application ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
3. Application ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು Upload ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ Upload ಮಾಡಿ (ಅಗತ್ಯವಿದ್ದರೆ ಮಾತ್ರ).
4. ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ


IBPS Recruitment 2023_ Important Dates

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01.06.2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21.06.2023
ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 21.06.2023


IBPS Recruitment 2023_ Important Links

ವೆಬ್ ಸೈಟ್: https://www.ibps.in/

ಅಧಿಸೂಚನೆ: https://www.ibps.in/wp-content/uploads/Final_ad_CRP-RRB-XII_updated_vacancies_8.6.23-1.pdf

ಅರ್ಜಿ ಲಿಂಕ್: https://www.ibps.in/crp-rrb-xii/

Join Telegram Channel for Daily Updates


Spread the love

Leave a Comment