ಸಹಾಯಕ ಅಭಿಯಂತರರು ಹುದ್ದೆಗಳಿಗೆ ಅರ್ಜಿ ಆಹ್ವಾನ: KPSC RDWSD Recruitment 2022

Spread the love

KPSC RDWSD Recruitment 2022

KPSC RDWSD Recruitment 2022 : ಕರ್ನಾಟಕ ಲೋಕಸೇವಾ ಆಯೋಗವು 2022ನೇ ಸಾಲಿಗೆ ಗ್ರೂಪ್-ಬಿ ವೃಂದದ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಯೋಗವು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 288 ಸಹಾಯಕ ಅಭಿಯಂತರರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇಲಾಖೆಯ ಗ್ರೂಪ್‌ ಬಿ ವೃಂದದಲ್ಲಿನ ಉಳಿಕೆ ಮೂಲ ವೃಂದದ ಸಹಾಯಕ ಅಭಿಯಂತರರು (ಗ್ರೇಡ್‌-1) 129 ಹುದ್ದೆಗಳು ಮತ್ತು ಹೈದೆರಾಬಾದ್ ಕರ್ನಾಟಕ ವೃಂದದ 59 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ 2022 ರ ಫೆಬ್ರುವರಿ 21 ರಂದು ಅಧಿಸೂಚನೆ ಪ್ರಕಟಿಸಿತ್ತು. ಸದರಿ ಹುದ್ದೆಗಳಿಗೆ ಈವರೆಗೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿರುವುದಿಲ್ಲ. ಆದ್ದರಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಸ್ತಾವನೆ ಮೇರೆಗೆ 100 ಹುದ್ದೆಗಳನ್ನು ಸೇರಿಸಿ, ಮತ್ತೆ ಅಧಿಸೂಚನೆ ಪ್ರಕಟಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

KPSC RDWSD ಉದ್ಯೋಗ ವಿವರ

ಇಲಾಖೆ ಹೆಸರು: RDWSD
ಹುದ್ದೆಯ ಹೆಸರು: ಸಹಾಯಕ ಅಭಿಯಂತರರು

ಹುದ್ದೆಗಳ ಸಂಖ್ಯೆ: 188+100

ಅರ್ಜಿ ಸಲ್ಲಿಸುವ ಬಗೆ : online

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 02.09.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.09.2022

KPSC RDWSD Recruitment Salary: 43100-83900/-

ವಿದ್ಯಾರ್ಹತೆ : BE(Civil/Environmental)


ವಯೋಮಿತಿ ಅರ್ಹತೆಗಳು:
ಕನಿಷ್ಟ – 18 ವರ್ಷ

ಗರಿಷ್ಟ – 35 ವರ್ಷ

ಜಾತಿವರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ & ಸಂದರ್ಶನ್

ಅರ್ಜಿ ಶುಲ್ಕ :
GEN – 600/- + 35
2A, 2B, 3A, 3B – 300/- +35
SC/ST/ – NIL + 35

KPSC RDWSD Important Links

ಅಧಿಸೂಚನೆ : https://www.kpscrecruitment.in/PublicApp/STD/PSC-1-RTB-1-2021.pdf

ಅರ್ಜಿ ಲಿಂಕ್ : https://www.kpscrecruitment.in/RPS/Home.aspx

ವೆಬ್ ಸೈಟ್ : https://kpsc.kar.nic.in/


Spread the love

Leave a Comment