Zilla Panchayat Recruitment 2022
Zilla Panchayat Recruitment 2022 : ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇರೆಗೆ ನೇಮಕಾತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
ಉದ್ಯೋಗ ವಿವರ
ಇಲಾಖೆ ಹೆಸರು: Zilla Panchayat Chitradurga
ಹುದ್ದೆಯ ಹೆಸರು: ಡಾಟಾ ಎಂಟ್ರಿ ಆಪರೇಟರ್ (6 ಹುದ್ದೆ), ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (01 ಹುದ್ದೆ), ಟೆಕ್ನಿಕಲ್ ಕೋ-ಆರ್ಡಿನೇಟರ್ (01 ಹುದ್ದೆ) & ತಾಂತ್ರಿಕ ಸಹಾಯಕರು (ಅರಣ್ಯ) (02 ಹುದ್ದೆ)
ಒಟ್ಟು ಹುದ್ದೆಗಳ ಸಂಖ್ಯೆ: 10
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 24.08.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08.09.2022
Zilla Panchayat Recruitment Salary
ಡಾಟಾ ಎಂಟ್ರಿ ಆಪರೇಟರ್ – 17,600/-
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ – 18,000/-
ಟೆಕ್ನಿಕಲ್ ಕೋ-ಆರ್ಡಿನೇಟರ್ – 29,000/-
ತಾಂತ್ರಿಕ ಸಹಾಯಕರು( ಅರಣ್ಯ)- 24,000/-
ವಿದ್ಯಾರ್ಹತೆ :
ಡಾಟಾ ಎಂಟ್ರಿ ಆಪರೇಟರ್ –PUC ವಿದ್ಯಾರ್ಹತೆ ಜೊತೆಗೆ ಉತ್ತಮ ಕಂಪ್ಯೂಟರ್ ಜ್ಞಾನ ಹೊಂದಿದ್ದು, ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ನಲ್ಲಿ ಪರಿಣಿತಿ ಹೊಂದಿರಬೇಕು.
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ – B.Com ಪದವಿ ಜೊತೆಗೆ ಉತ್ತಮ ಕಂಪ್ಯೂಟರ್ ಜ್ಞಾನ ಹೊಂದಿದ್ದು, ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ನಲ್ಲಿ ಪರಿಣಿತಿ ಹೊಂದಿರಬೇಕು.
ಟೆಕ್ನಿಕಲ್ ಕೋ-ಆರ್ಡಿನೇಟರ್ – BE(Civil)ಪದವಿ ಹೊಂದಿರಬೇಕು ಹಾಗೂ ನರೇಗಾ ಯೋಜನೆಯಡಿ 05 ವರ್ಷಗಳ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ.
ತಾಂತ್ರಿಕ ಸಹಾಯಕರು (ಅರಣ್ಯ) –BSc (ಅರಣ್ಯ) ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ವಯೋಮಿತಿ ಅರ್ಹತೆಗಳು: ಕನಿಷ್ಟ ವಯೋಮಿತಿ – 18 ವರ್ಷ
ಗರಿಷ್ಟ ವಯೋಮಿತಿ
ಸಾಮಾನ್ಯ ವರ್ಗ – 35 ವರ್ಷ
ಪ್ರವರ್ಗ 2A,2B,3A,3B – 38 ವರ್ಷ
SC,ST, ಪ್ರವರ್ಗ 1 – 40 ವರ್ಷ
ಅರ್ಜಿ ಶುಲ್ಕ: ಅರ್ಜಿ ಶುಲ್ಕವಿಲ್ಲ
ಆಯ್ಕೆ ವಿಧಾನ : ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಗೆ ಅನುಗುಣವಾಗಿ ಮೆರಿಟ್ ಪಟ್ಟಿ ತಯಾರಿಸಿ, ಡಾಟಾ ಎಂಟ್ರಿ ಆಪರೇಟರ್, ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್, ಟೆಕ್ನಿಕಲ್ ಕೋ-ಆರ್ಡಿನೇಟರ್ ಹುದ್ದೆಗಳಿಗೆ ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳು ಟೈಪಿಂಗ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರುವುದನ್ನು ಪ್ರಾಯೋಗಿಕ ಪರೀಕ್ಷೆ ಮೂಲಕ ಖಚಿತಪಡಿಸಿಕೊಂಡು ಆಯ್ಕೆ ಮಾಡಲಾಗುವುದು
Zilla Panchayat Recruitment_Important Links
ಅಧಿಸೂಚನೆ : https://cdn.s3waas.gov.in/s3a8ecbabae151abacba7dbde04f761c37/uploads/2022/08/2022082351.pdf
ಅರ್ಜಿ ಲಿಂಕ್ : https://chitradurga.nic.in/en/